08251-230016 Main Road, Puttur, Karnataka

Educational Activities

ಮಕ್ಕಳ ಪಠ್ಯೇತರ ಚಟುವಟಿಕೆಗಳ ವಿವರ:
ಶಿಕ್ಷಣಕ್ಕೆ ಪೂರಕವಾಗಿ ಆಶ್ರಮದ ಮಕ್ಕಳಿಗೆ ಯೋಗಾಸನ, ಸಂಗೀತ, ಭರತನಾಟ್ಯ, ಭಜನೆ, ಚಿತ್ರಕಲೆ ಹಾಗೂ ಸಂಸ್ಕೃತ ಮೊದಲಾದ ಪಠ್ಯೇತರ ವಿಷಯಕ್ಕೆ ಸಂಬಂಧಿಸಿದ ತರಬೇತಿಯನ್ನು ನೀಡಲಾಗುತ್ತಿದೆ. ನಮ್ಮ ಮಕ್ಕಳು ವಿವಿಧ ಸಂಘ ಸಂಸ್ಥೆಗಳು ನಡೆಸಿದ ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.

2017-18ನೇ ಸಾಲಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಹೋಗುವ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಾದ ವೈಶಾಲಿ, ಸೌಜನ್ಯ, ಕೀರ್ತನಾ, ಪುನೀತ್ ರಾಜ್, ಭರತ್ ಇವರು ಜಿಲ್ಲಾಮಟ್ಟದ ವಿಭಾಗದಲ್ಲಿ ಆಲಂಕಾರು ಭಾರತಿ ಶಾಲೆಯಲ್ಲಿ ಏರ್ಪಡಿಸಲಾದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವೈಶಾಲಿ ಮತ್ತು ಭರತ್ ಪ್ರಥಮ ಸ್ಥಾನ ಗಳಿಸಿದ್ದು, ಇನ್ನುಳಿದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ವೈಶಾಲಿ ಮತ್ತು ಭರತ್ ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ರಾಷ್ಟ್ರಮಟ್ಟದ ಸ್ಪರ್ಧೆಯು ಆಂಧ್ರಪ್ರದೇಶದಲ್ಲಿ ನಡೆದಿದ್ದು, ಈ ಎರಡು ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ ಹಾಗೂ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾವನ್ನು ಪಡೆದಿರುತ್ತಾರೆ. ಮತ್ತು ರಾಷ್ಟ್ರಮಟ್ಟದಲ್ಲಿ ಚೆನ್ನೈನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಆರೋಗ್ಯ ಶಿಬಿರಗಳು:

ದಿನಾಂಕ 11-08-2017ರಂದು ಆನಂದಾಶ್ರಮ ಸೇವಾ ಟ್ರಸ್ಟ್ ಶ್ರೀ ರಾಮಕೃಷ್ಣ ಸೇವಾ ಸಮಾಜ (ರಿ.) ಪುತ್ತೂರು ಮತ್ತು ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಲಾಯಿತು. ಈ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಒಟ್ಟು 163 ಮಂದಿ ಭಾಗವಹಿಸಿರುತ್ತಾರೆ, ಮತ್ತು 18-06-2017 ರಂದು ಆಶ್ರಮದ ಎಲ್ಲಾ ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನು ಮಾಡಲು ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿಯ ಮಕ್ಕಳ ತಜ್ಞೆಯಾದ ಡಾ|| ಅರ್ಚನಾ ಕರಿಕ್ಕಳ ಇವರು ಸಮಾಜದ ಎಲ್ಲಾ ಮಕ್ಕಳ ವೈದ್ಯಕೀಯ ತಪಾಸಣೆಯನ್ನು ಮಾಡಿರುತ್ತಾರೆ. ಹಾಗೂ ದಿನಾಂಕ 16-07-2018ರಂದು ನಮ್ಮ ಸಮಾಜದ ಮಕ್ಕಳನ್ನು ಚರ್ಮರೋಗದ ತಜ್ಞರಾದ ಡಾ|| ಎನ್. ಬದರಿನಾಥ್ ಇವರು ತಪಾಸಣೆಯನ್ನು ಮಾಡಿರುತ್ತಾರೆ.

ವಿದ್ಯಾರ್ಥಿಗಳ ಸಂಖ್ಯೆ:

ವರದಿ ವರ್ಷದ ಅಂತ್ಯದಲ್ಲಿ ನಮ್ಮ ಸಮಾಜದಲ್ಲಿ 76 ಮಂದಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ 28 ಹುಡುಗರು ಮತ್ತು 48 ಹುಡುಗಿಯರು.

 

ಫಲಿತಾಂಶ:

201718ನೇ ಸಾಲಿನ ಶೈಕ್ಷಣಿಕ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಡೆದ ಪರೀಕ್ಷೆಗಳಲ್ಲಿ 1ರಿಂದ 9ನೇ ತರಗತಿಯವರೆಗೆ 100 ಫಲಿತಾಂಶ ಹಾಗೂ 10ನೇ ತರಗತಿಯಲ್ಲಿ ಪರೀಕ್ಷೆಗೆ ಹಾಜರಾದ 8 ವಿದ್ಯಾರ್ಥಿಗಳಲ್ಲಿ 5 ಮಂದಿ ಪ್ರಥಮ, 3 ದ್ವಿತೀಯ ಶ್ರೇಣಿಯಲ್ಲಿ, 1 ದ್ವಿತೀಯ ಪಿಯುಸಿ ವಿಭಾಗದಲ್ಲಿ 3 ಮಂದಿ ಡಿಸ್ಟಿಂಕ್ಷನ್ 1 ಪ್ರಥಮ ಶ್ರೇಣಿಯಲ್ಲಿ 2 ಮಂದಿ ಉತ್ತೀರ್ಣರಾಗಿರುತ್ತಾರೆ.
2017-18ನೇ ಸಾಲಿನಲ್ಲಿ ಭರತನಾಟ್ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಚೈತ್ರ, ಮಧುಶ್ರೀ, ವೈಶಾಲಿ ಇವರು ಅತೀ ಹೆಚ್ಚು ಅಂಕಗಳನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಹೀಗೆ ನಮ್ಮ ಸಮಾಜದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿಲ್ಲವೆಂದು ನಾವು ಭಾವಿಸುತ್ತೇವೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ನಾವು ತುಂಬು ಹೃದಯದಿಂದ ಅಭಿನಂದಿಸುತ್ತೇವೆ.
ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ 1) ನಮ್ಮಲ್ಲಿ ನಡೆಯುವ ಶಿಶು ಮಂದಿರದಲ್ಲಿ ಸಣ್ಣ ಮಕ್ಕಳು, 2: 1ರಿಂದ 6ನೇ ತರಗತಿಯವರೆಗೆ ಕಲಿಯುವ ಮಕ್ಕಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಟ್ಟೆ ಇಲ್ಲಿಯೂ, 3) 7ರಿಂದ 10ನೇ ತರಗತಿ ವಿದ್ಯಾರ್ಥಿಗಳು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಹಾಗೂ ಪಿಯುಸಿ ವಿದ್ಯಾರ್ಥಿಗಳು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು, ಮಹಿಳಾ ಕಾಲೇಜು ಪುತ್ತೂರು ಇಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ನಮ್ಮ ಮಕ್ಕಳಿಗೆ ಶಾಲಾ ಪಠ್ಯಗಳ ಕುರಿತು ವಿಶೇಷ ತರಬೇತಿಯನ್ನು ನಮ್ಮ ಸಂಸ್ಥೆಯ ಮೇಲಿನ ಪ್ರೀತಿಯಿಂದ ಕೊಡುವ ಶ್ರೀಮತಿ. ಶಂಕರಿ ಶರ್ಮ, ಎಂ.ಎಸ್. ಚೆಟ್ಟಿಯಾರ್ ಹಾಗೂ ಕೇಶವ ಭಟ್ ಇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನಮ್ಮ ಮಕ್ಕಳಿಗೆ ನೃತ್ಯ/ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೆರವು ನೀಡುತ್ತಿರುವ ಶ್ರೀಮತಿ ನಯನ ವಿ ರೈ ಮತ್ತು ಶ್ರೀಮತಿ ಸ್ವಸ್ತಿಕ ರೈ ಇವರಿಗೆ ನಮ್ಮ ಕೃತಜ್ಞತೆಗಳು.

 

————————————————————————————————————–

ನಮ್ಮ ಸಂಸ್ಥೆಯ ಇತರ ಸಮಾಜಿಕ ಚಟುವಟಿಕೆಗಳು:
ಲಯನೆಸ್ಸ್ ಕ್ಲಬ್ & ಲಯನ್ಸ್ ಕ್ಲಬ್ ಪುತ್ತೂರು ಹಾಗೂ ಸನಾತನ ಸಂಸ್ಥೆ ಇವರು ಆಶ್ರಮದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಸಿಕೊಟ್ಟಿರುತ್ತಾರೆ.
ಈ ವರ್ಷದ ನಮ್ಮ ಸಂಸ್ಥೆಯ ಎಲ್ಲಾ ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಶ್ರೀ ಕುಡ್ಗಿ ಪ್ರಭಾಕರ ಶೆಣೈ, ಕುಡ್ಗಿ ಇಂಡಸ್ಟ್ರೀಸ್ ದರ್ಬೆ ಪುತ್ತೂರು ಇವರು ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿರುತ್ತಾರೆ.
2017-18ನೇ ಸಾಲಿನಲ್ಲಿ ಪ್ರತೀ ತಿಂಗಳ ದಿನಾಂಕ 12ರಂದು ಆ ತಿಂಗಳಲ್ಲಿ ಜನಿಸಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.