08251-230016 Main Road, Puttur, Karnataka

News

* ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕ ದಿನಾಚರಣೆ, ವಾರ್ಷಿಕೋತ್ಸವ Click here for more details

 

——————————————————————————————-

 

* ನೆಲ್ಲಿಕಟ್ಟೆ ರಾಮಕೃಷ್ಣ ಸೇವಾ ಸಮಾಜದಲ್ಲಿ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ Click here for more details

 

——————————————————————————————-

ಪುತ್ತೂರು ಜಾತ್ರೋತ್ಸವದಂದು ಪೇಟೆಸವಾರಿಯೊಂದಿಗೆ ರಾಮಕೃಷ್ಣ ಆಶ್ರಮದ ಕಟ್ಟೆಪೂಜೆ ಸ್ವೀಕರಿಸುವ ಹತ್ತೂರ ಒಡೆಯ

 


ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಪೇಟೆ ಸವಾರಿಯೊಂದಿಗೆ ಎರಡನೇ ದಿನದಂದು (ಏ.11) ಶ್ರೀ ದೇವರು ರಾಮಕೃಷ್ಣ ಆಶ್ರಮದ ಕಟ್ಟೆಗೆ ಭೇಟಿ ನೀಡಿ ಪೂಜೆ ಸ್ವೀಕರಿಸುತ್ತಾರೆ.
ಸುಮಾರು 14 ವರ್ಷಗಳ ಹಿಂದೆ ನ್ಯಾಯವಾದಿ ಬಿ. ಸದಾಶಿವ ರಾಯರು ಈ ಕಟ್ಟೆಯನ್ನು ಆಶ್ರಮದ ವಠಾರದಲ್ಲಿ ನಿರ್ಮಿಸಿದರು. ಆಶ್ರಮದ ಮಕ್ಕಳಿಗೆ ದೇವರ ದರ್ಶನ ಸಿಗಬೇಕು ಎಂಬ ಉದ್ದೇಶದಿಂದ ಈ ಕಟ್ಟೆಯನ್ನು ನಿರ್ಮಿಸಲಾಗಿದೆ. ಪ್ರಸ್ತುತ ಆಶ್ರಮದ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಕಟ್ಟೆಯನ್ನು ನಿರ್ವಹಿಸುತ್ತಿದ್ದಾರೆ. ನಾಗಸಂಪಿಗೆಯ ಮರಕ್ಕೆ ಕಟ್ಟೆಯನ್ನು ಕಟ್ಟಲಾಗಿರುವುದು ಇಲ್ಲಿನ ವಿಶೇಷತೆಯಾಗಿದೆ.

 

…………………………………………………………………………………………………………………………………….

 

ಶ್ರೀ ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ
ಸಂಸ್ಕಾರ ಉಳಿಸುವ ರಾಯಭಾರಿಗಳು ಇಲ್ಲಿ ತಯಾರಾಗುತ್ತಿದ್ದಾರೆ – ಡಾ| ವಿಜಯ ಸರಸ್ವತಿ

ಪುತ್ತೂರು: ನೆಲ್ಲಿಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಮಾರಂಭ ದ.21ರಂದು ಸಂಸ್ಥೆಯ ವಠಾರದಲ್ಲಿ ನಡೆಯಿತು.
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿಯವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಸಂಸ್ಕಾರ ಸಂಸ್ಕೃತಿ ಉಳಿಸುವ ರಾಯಭಾರಿಗಳು ಇಲ್ಲಿ ತಯಾರಾಗುತ್ತಿರುವುದು ತುಂಬಾ ಸಂತಸದ ವಿಚಾರ. ಕಣ್ಣಿಗೆ ಕಾಣುವ ದೇವರ ಸೇವೆ ಮಾಡುವ ಸಂಸ್ಥೆಯ ಕಾರ್ಯ ಎಲ್ಲಕ್ಕಿಂತ ಮಿಗಿಲಾದುದು. ಸಮಾಜದಿಂದ ಪಡೆದುಕೊಂಡದನ್ನು ಸಮಾಜಕ್ಕೆ ನೀಡದಿದ್ದರೆ ಮೃತ ಸಮುದ್ರದಂತೆ ನಾವಾಗುತ್ತೇವೆ ಎಂದು ಹೇಳಿ ಮಕ್ಕಳಿಗೆ ಆತ್ಮವಿಶ್ವಾಸ ಇರಿಸಿಕೊಳ್ಳಲು ಕಿವಿ ಮಾತು ಹೇಳಿದರು.

ಸಂಸ್ಥೆಗೆ ಕೊಡುಗೈ ದಾನಿಯಾಗಿರುವ ವಿನಾಯಕ ಕುಡ್ವರವರು ಮಾತನಾಡಿ `ರಾಮಕೃಷ್ಣ ಸೇವಾ ಸಮಾಜವೆಂಬ ಕುಟುಂಬದ ಸದಸ್ಯನಾಗಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಮನಸ್ಸಿಗೆ ಆನಂದದ ಜೊತೆಗೆ ಸಂತೃಪ್ತಿ ನೀಡಿದೆ’ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯರು ಮಾತನಾಡಿ `ಇಲ್ಲಿನ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೂ ಹೋಗಲು ದಾನಿಗಳ ನೆರವು ಬರುತ್ತಿದೆ. ಉನ್ನತ ವಿದ್ಯಾಭ್ಯಾಸ ಮಾಡುವ ಮಕ್ಕಳ ಸಂಖ್ಯೆ ವೃದ್ಧಿಯಾಗಲಿ’ ಎಂದು ಹೇಳಿ ಶುಭ ಹಾರೈಸಿದರು.

ಸಂಸ್ಥೆಯ ಬೆಳವಣಿಗೆಗೆ ಮೂಲ ಕಾರಣ ಸಿಬಂದಿಗಳು: ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ತಿಳಿಸುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಮೂಲಕಾರಣರು ನಮ್ಮ ಸಿಬ್ಬಂದಿಗಳು. ಅವರು ಸಹೋದರಿಯಾಗಿ, ತಾಯಿಯಾಗಿ, ಶಿಕ್ಷಕಿಯಾಗಿ ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದು, ನಮ್ಮ ನಿರೀಕ್ಷೆಗೂ ಮೀರಿ ಅವರು ಕೆಲಸ ನಿರ್ವಹಿಸಿದ್ದಾರೆ. ದಾನಿಗಳು ಸಹ ದೊಡ್ಡ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ. ಆದರೆ ಅವರೆಲ್ಲರೂ ತಮ್ಮ ಹೆಸರನ್ನು ಪ್ರಕಟಿಸಲು ಅನುಮತಿ ನೀಡದೆ ತೆರೆಮರೆಯಲ್ಲಿ ಸಹಾಯ ಹಸ್ತ ನೀಡುತ್ತಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಗುಣಪಾಲ್ ಜೈನ್‌ರವರು ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು.

ಸನ್ಮಾನ: ಸಂಸ್ಥೆಯಲ್ಲಿದ್ದು ಶಿಕ್ಷಣ ಪಡೆದು ಭರತನಾಟ್ಯ, ಯೋಗ, ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಬೆಳ್ತಂಗಡಿ ಗೇರುಕಟ್ಟೆ ನಿವಾಸಿ ವೈಶಾಲಿ, ಮುಡೂರು ನಿವಾಸಿ ಲಾವಣ್ಯ, ಇಚಿಲಂಪಾಡಿ ನೇರ್ಲ ನಿವಾಸಿ ಸ್ವಾತಿ, ಮುರುಳ್ಯ ನಿವಾಸಿ ಮಧುಶ್ರೀ, ವಳಾಲು ನಿವಾಸಿ ಭರತ್‌ರವರನ್ನು ಅತಿಥಿಗಳು ಗೌರವಿಸಿದರು. ಸಂಸ್ಥೆಯಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ನಡೆಯಿತು. ಇತ್ತೀಚೆಗೆ ನಿಧನರಾದ ವಿಶ್ವಕಲಾನಿಕೇತನದ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈರವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ಸಭಾ ಕಾರ್ಯಕ್ರಮದ ನಡುವೆ ಮಾಡಲಾಯಿತು.

ವೆಬ್‌ಸೈಟ್ ಲಾಂಚ್: ಸಂಸ್ಥೆಯ ನೂತನ ವೆಬ್‌ಸೈಟ್ www.rkssamaja.org ಗೆ ಅಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯರು ಕಂಪ್ಯೂಟರ್ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು. ಸುದ್ದಿ ಕಂಪ್ಯೂಟರ್‍ಸ್ ವಿನ್ಯಾಸಗೊಳಿಸಿರುವ ವೆಬ್‌ಸೈಟ್ ಸಂಸ್ಥೆಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ಉದ್ಘಾಟನಾ ಸಂದರ್ಭದಲ್ಲಿ ಸುದ್ದಿ ಬಿಡುಗಡೆಯ ಚಂದ್ರಕಾಂತ್ ಉರ್ಲಾಂಡಿ ಹಾಗೂ ಉಮೇಶ್ ಮಿತ್ತಡ್ಕ ಉಪಸ್ಥಿತರಿದ್ದರು.


ರೋಟರಿ ಕ್ಲಬ್ ವತಿಯಿಂದ ಸನ್ಮಾನ: ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ರೋಟರಿ ಕ್ಲಬ್ ಆಫ್ ವಿಲಿಯಂಸನ್ ನ್ಯೂ ವರ್ಜೀನಿಯಾ ಯುಎಸ್‌ಎ ಇದರ ವತಿಯಿಂದ ಸಂಸ್ಥೆಯ ಕಾರ್ಯದರ್ಶಿ ಗುಣಪಾಲ್ ಜೈನ್‌ರವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಆಫ್ ವಿಲಿಯಂಸನ್‌ನ ನಿಕಟಪೂರ್ವ ಜಿಲ್ಲಾ ಗವರ್ನರ್ ವಿನಾಯಕ ಕುಡ್ವ, ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಸೂರಜ್ ಶೆಟ್ಟಿ, ಕಾರ್ಯದರ್ಶಿ ಕುಸುಮರಾಜ್, ಉಮೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ಖಜಾಂಜಿ ಶಶಿಕಲಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯದರ್ಶಿ ಗುಣಪಾಲ್ ಜೈನ್ ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯ ವಸಂತ ಕುಮಾರ್ ರೈ ವಂದಿಸಿದರು. ಸಹಕಾರ್ಯದರ್ಶಿ ವತ್ಸಲಾ ರಾಜ್ಞಿ ವರದಿ ವಾಚಿಸಿದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಮಾಜದ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು. ಸಭಾ ಕಾರ್ಯಕ್ರಮದ ಮೊದಲು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಳಿಕ ಮಕ್ಕಳಿಂದ ಬಾಲಕೃಷ್ಣ ಪೂಜಾರಿ ಉಡ್ಡಂಗಳರವರ ನಿರ್ದೇಶನದಲ್ಲಿ, ಚಂದ್ರಶೇಖರ ಸುಳ್ಯಪದವುರವರ ಸಂಯೋಜನೆಯಲ್ಲಿ ಯಕ್ಷಗಾನ ಜರಗಿತು.

 

 

 

 

…………………………………………………………………………………………………………………………………….

 

ಶ್ರೀ ರಾಮಕೃಷ್ಣ ಸೇವಾಸಮಾಜದಲ್ಲಿ ಸ್ವಾತಂತ್ರ್ಯೋತ್ಸವ – 2018

ಪುತ್ತೂರು: ಭಾರತದ ಪುಣ್ಯಭೂಮಿ ದೇಶಕ್ಕಾಗಿ ಅರ್ಪಣಾ ಭಾವ ಮತ್ತು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರಿಗೆ ತರ್ಪಣ ಸಲ್ಲಿಸುವ ಏಕೈಕ ಶ್ರೇಷ್ಠ ಭೂಮಿಯಾಗಿದೆ ಎಂದು ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ ಹೇಳಿದರು.
ಶ್ರೀ ರಾಮಕೃಷ್ಣ ಸೇವಾ ಸಮಾಜ ಪುತ್ತೂರು ಮತ್ತು ಪುತ್ತೂರಿನ ವಿವಿಧ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಸೇವಾ ಸಮಾಜದ ಮಕ್ಕಳೊಂದಿಗೆ ನಡೆದ ೭೨ನೇ ಸ್ವಾಂತ್ರ್ಯೋತ್ಸವ ಆಚರಣೆಯ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಪಿ. ವಾಮನ ಪೈ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಶ್ರೀರಾಮಕೃಷ್ಣ ಸೇವಾ ಸಮಾಜದ ಅಧ್ಯಕ್ಷ ಎನ್. ಸುಬ್ರಮಣ್ಯಂರವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಕಾರ್ಯದರ್ಶಿ ಗುಣಪಾಲ್ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆಗಳಾದ ಲಯನ್ಸ್ ಕ್ಲಬ್‌ನ ಅಧ್ಯಕ್ಷ ವೆಂಕಟರಮಣ ಘಾಟೆ, ಲಯನೆಸ್ ಕ್ಲಬ್‌ನ ಶಾರದಾ ಅರಸು, ರೋಟರಿ ಪೂರ್ವದ ಅಧ್ಯಕ್ಷ ಅಬ್ಬಾಸ್ ಕೆ., ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷ ಪುಷ್ಪ ಕೆದಿಲಾಯ, ರೋಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಶಶಿಧರ ಕೆ., ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಮನೋಹರ ಕೆ., ಡಾಕ್ಟರ್‍ಸ್ ಫೋರಂನ ಅಧ್ಯಕ್ಷ ಡಾ. ಅಶೋಕ್, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಉಮೇಶ್ ಮಿತ್ತಡ್ಕ, ಪುತ್ತೂರು ಎಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್‍ಸ್‌ನ ಅಧ್ಯಕ್ಷ ಶಂಕರ ಭಟ್, ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ ಗೌಡ ಕೆ., ರೋಟರ್‍ಯಾಕ್ಟ್ ಕ್ಲಬ್ ತಿಂಗಳಾಡಿಯ ಅಧ್ಯಕ್ಷ ಸಂಪತ್ ಕುಮಾರ್, ರೋಟರಿ ಕ್ಲಬ್ ಸ್ವರ್ಣ ಅಧ್ಯಕ್ಷ ಮನೋಹರ ಕುಮಾರ್, ರೋಟರಿ ಕ್ಲಬ್ ಯುವದ ಅಧ್ಯಕ್ಷ ಸೂರಜ್ ಶೆಟ್ಟಿ ಉಪಸ್ಥಿತರಿದ್ದರು. ಬೆಳಗ್ಗಿನ ಲಘು ಉಪಾಹಾರದ ಪ್ರಾಯೋಜಕತ್ವವನ್ನು ರೋಟರಿ ಪುತ್ತೂರು ಪೂರ್ವದ ಸ್ಥಾಪಕಾಧ್ಯಕ್ಷ ಕೆ.ಆರ್. ಶೆಣೈ ವಹಿಸಿದ್ದರು. ಆಶ್ರಮದ ವಿದ್ಯಾರ್ಥಿನಿ ಮಧುಶ್ರೀ ಸ್ವಾತಂತ್ರ್ಯ ದಿನದ ಬಗ್ಗೆ ಭಾಷಣ ಮಾಡಿದರು. ವಿದ್ಯಾರ್ಥಿನಿಯರಾದ ಲಿಖಿತಾ ಮತ್ತು ನಂದಿನಿ ಪ್ರಾರ್ಥಿಸಿದರು. ಲಯನೆಸ್ ಕ್ಲಬ್ ಕಾರ್ಯದರ್ಶಿ ಸುಮಂಗಲಾ ಶೆಣೈ ಸ್ವಾಗತಿಸಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ರಂಜಿತಾ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಸಮಿತಿ ಸದಸ್ಯ ರವಿ ಮುಂಗ್ಲಿಮನೆ ಕಾರ್ಯಕ್ರಮ ಸಂಯೋಜಿಸಿದರು. ಬಳಿಕ ಸಹಭೋಜನ ನಡೆಯಿತು.
ಸ್ವಾತಂತ್ರ್ಯ ಸಂಗ್ರಾಮ ನೆನಪಿಸಿದ ಮಕ್ಕಳ ನಾಟಕ : `ಎಲೈ ಬ್ರಿಟೀಷರೇ, ನಮ್ಮ ಸ್ವಾತಂತ್ರ್ಯವನ್ನು ನಮಗೆ ಕೊಡಿ. ಇಲ್ಲದಿದ್ದಲ್ಲಿ ನಾವೆಲ್ಲಾ ಸಂಘಟಿತರಾಗಿ ನಿಮ್ಮನ್ನು ಹೊರಗೋಡಿಸಬಲ್ಲೆವು.’ ಎಲೈ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಹೀಗೆಲ್ಲಾ ವೀರಾವೇಶದಿಂದ ಹೋರಾಟದ ಕೆಚ್ಚಿನಲ್ಲಿ ಮಾತನಾಡುವ ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧಿಜಿ, ಸುಭಾಶ್ ಚಂದ್ರ ಬೋಸ್, ಭಗತ್‌ಸಿಂಗ್ ಇತ್ಯಾದಿ ಸ್ವಾತಂತ್ರ್ಯವೀರರ ಸಂಭಾಷಣೆ, ಧಿರಿಸುಗಳನ್ನು ನೋಡುತ್ತಲೇ ಸ್ವಾತಂತ್ರ್ಯ ಸಂಗ್ರಾಮದ ಕಥೆ ಕಣ್ಣಿಗೆ ಕಟ್ಟುವಂತೆ ಭಾಸವಾಯಿತು. ಸಭಾ ಕಾರ್ಯಕ್ರಮದ ಬಳಿಕ ೧೦ ನಿಮಿಷಗಳ ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವ ನಾಟಕ ಮನೋಜ್ಞವಾಗಿ ಮೂಡಿಬಂತು. ಸಭಾ ಕಾರ್ಯಕ್ರಮದ ಮೊದಲು ರಾಮಕೃಷ್ಣ ಸೇವಾಶ್ರಮದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸಹಯೋಗ ಸಂಘ-ಸಂಸ್ಥೆಗಳಿಗೆ ಕರ್ನಾಟಕ ಪತ್ರಕರ್ತರ ಸಂಘ ಸೇರ್ಪಡೆ
ಶ್ರೀರಾಮಕೃಷ್ಣ ಸೇವಾ ಸಮಾಜದ ಮಕ್ಕಳೊಂದಿಗೆ ಪ್ರತೀ ವರ್ಷ ಪುತ್ತೂರು ತಾಲೂಕಿನ ವಿವಿಧ ಸೇವಾ ಸಂಸ್ಥೆಗಳು ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಹೊಸದಾಗಿ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕ ಸೇರ್ಪಡೆಗೊಂಡಿದ್ದು , ಪ್ರಸ್ತುತ ಒಟ್ಟು 17 ಸೇವಾ ಸಂಸ್ಥೆಗಳು ಸಹಯೋಗ ಹೊಂದಿವೆ. ಆರಂಭ ವರ್ಷದ ಪ್ರಯುಕ್ತ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಸಂಘದ ಅಧ್ಯಕ್ಷ ಉಮೇಶ್ ಮಿತ್ತಡ್ಕ, ಪ್ರ.ಕಾರ್‍ಯದರ್ಶಿ ಯುಸೂಫ್ ರೆಂಜಲಾಡಿ, ಉಪಾಧ್ಯಕ್ಷ ಫಾರೂಕ್ ಶೇಖ್, ಕೋಶಾಧಿಕಾರಿ ಸದಾಶಿವ ಶೆಟ್ಟಿ ಮಾರಂಗ, ಸದಸ್ಯರಾದ ಚಂದ್ರಕಾಂತ್ ಉರ್ಲಾಂಡಿ ಹಾಗೂ ಪ್ರಿಯತ್ ಕುಮಾರ್ ಉಪಸ್ಥಿತರಿದ್ದರು.

 

 

…………………………………………………………………………………………………………………………………….

 

 

…………………………………………………………………………………………………………………………………….