08251-230016 Main Road, Puttur, Karnataka

Thanks by President

ಈ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಲು ಹಲವರ ಸಹಾಯ – ಸಹಕಾರದಿಂದ ಸಾಧ್ಯವಾಗಿದೆ. ಈ ದೃಷ್ಟಿಯಿಂದ ಆಡಳಿತ ಮಂಡಳಿಯ ಸಲಹೆ-ಸೂಚನೆಗಳು ಮತ್ತು ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ಇದರೊಂದಿಗೆ ಆಶ್ರಮದ ಮಕ್ಕಳನ್ನು ಪಾಲನೆ, ಪೋಷಣೆ ಮಾಡಲು ಅನುದಾನ ನೀಡುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಇದರ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಮಂಗಳೂರು ಮತ್ತು ಪುತ್ತೂರಿನ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ನಮ್ಮ ಈ ಸಂಸ್ಥೆಯು ಸುಸೂತ್ರವಾಗಿ ನಡೆಯುವಂತೆ ಮಾಡಲು ದೈನಂದಿನ ಖರ್ಚಿಗೆಂದು ಆರ್ಥಿಕ ಸಹಾಯ ನೀಡಿದ ಎಲ್ಲಾ ಸಂಸ್ಥೆಗಳಿಗೆ, ದಾನಿಗಳಿಗೆ, ನಿರಖು ಠೇವಣಿ ಇತ್ತು ಇದರ ಬಡ್ಡಿಯನ್ನು ನಮ್ಮ ಸಮಾಜದ ಚಟುವಟಿಕೆಗಳಿಗೆ ಉಪಯೋಗಿಸಲು ಅನುವು ಮಾಡಿಕೊಟ್ಟ ಹಾಗೂ ಮಕ್ಕಳ ಒಂದು ವರ್ಷದ ಶೈಕ್ಷಣಿಕ ಖರ್ಚನ್ನು ನೀಡಿದ ಹಾಗೂ ಮಧ್ಯಾಹ್ನ/ರಾತ್ರಿ ಹಾಗು ಒಂದು ದಿನದ ಊಟ, ಉಪಚಾರಗಳಿಗೆ ಧನಸಹಾಯವಿತ್ತ ಬಾಂಧವರಿಗೆ, ಸಂಘ-ಸಂಸ್ಥೆಗಳಿಗೆ ತುಂಬುಹೃದಯದ ಕೃತಜ್ಞತೆಗಳು.
ಆಶ್ರಮದ ಮಕ್ಕಳಿಗೆ ಉಚಿತ ವೈದ್ಯಕೀಯ ನೆರವು ನೀಡುತ್ತಿರುವ ಪುತ್ತೂರಿನ ಎಲ್ಲಾ ವೈದ್ಯ ಸಮುದಾಯಕ್ಕೆ ಆಶ್ರಮದ ಎಲ್ಲಾ ಚಟುವಟಿಕೆಗಳಿಗೆ ಕೈಜೋಡಿಸಿ ನೆರವು ನೀಡುತ್ತಿರುವ ಪುತ್ತೂರಿನ ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳಿಗೆ, ವಿವಿಧ ಬ್ಯಾಂಕ್‌ಗಳಿಗೆ, ವಿದ್ಯುತ್ ಇಲಾಖೆಗೆ, ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಶ್ರಮದ ಅಭಿವೃದ್ಧಿಗೆ ಉದಾರವಾಗಿ ನೆರವು ನೀಡುತ್ತಿರುವ ಊರ, ಪರವೂರ ಹಿತೈಷಿಗಳು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಮಹನೀಯರಿಗೂ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
ವಂದನೆಗಳೊಂದಿಗೆ,

ಎನ್. ಸುಬ್ರಮಣ್ಯಂ ಕೊಳತ್ತಾಯ, ಅಧ್ಯಕ್ಷರು ಶ್ರೀ ರಾಮಕೃಷ್ಣ ಸೇವಾ ಸಮಾಜ (ರಿ.), ಪುತ್ತೂರು