Bank Details
BANK NAME: KARNATAKA BANK
BRANCH: PUTTUR
ACCOUNT HOLDER NAME: SRI RAMAKRISHNA SEVA SAMAJA (R), Nellikatte, Puttur
Account Number: 6042500100151701
IFSC CODE: KARB0000604
Donate Online
Sri Ramakrishna Seva Samaj, Puttur is successfully running Ma-Sharadamani Orphanage, Manjakke Destitute Cottage, Niveditha Shishu Vihar etc., for the past more than 5 decades, inspired by its founders. We express our gratitude to the government. General Public including institutions and service organizations for their valuable help all these years in running all the activities of the “Samaj”.
This year we have more than 150 orphan / destitute children who are given free education, food, shelter, clothing – besides we are also imparting education in Yoga fine arts like Music – Dance etc., towards the over-all development of the children.
The old building requires Major Repairs Alteration Additions. We require additional Bathrooms, Toilets. We solicit your valuable support.
- By donating any sum towards the construction of the building.
- By adopting one Orphan / Destitute child for one year by paying Rs.8,000.00 to meet his/her expenses.
- By adopting one Orphan / Destitute child for one year of PUC and Degree students by paying Rs.15,000-00 to meet his / her expenses.
- a) By contributing Rs.10,000-00 being one day expenses to provide the Morning, Midday, Evening and Night food to the entire inmates of the Samaj.
- b) By contributing Rs.4,000-00 towards the expenses for providing one Midday meal or dinner to the entire inmates of the samaj.
- c) By contributing Rs.3,000.00 towards the expenses for providing one Morning and evening food.
- By way of Trust Deposit, any sum and to utilize its Interest annually (towards any of the purpose mentioned above)
- By contributing any sum – every month or by donating in kind.
- By contributing Rs.30,000/- as Trust Deposit for Midday meal / Dinner (Permanent).
- By Contributing Rs.1,00,000/- as Trust Deposit for one day towards food expenses for entire inmates of the Samaj.
Note :
- The donations can be made in the name of any one you suggest in their Memory or for any specific cause.
- You can donate as Trust Deposit any sum with a direction to utilize its interest only annually for any of the purpose you suggest as a permanent project in your name.
- Please make it convenient to visit our ‘Samaj’ and associate yourself with the Samaj and give all encouragement and help to the Orphans and Destitutes.
- All the contributions / Donations are exempted under Sec. 80G of income Tax Act. We are permitted receive foreign contribution also.
———————————————————————————————————
ಕಳೆದ 50 ವರ್ಷಗಳಿಂದ ಪುತ್ತೂರಿನಲ್ಲಿ ನಮ್ಮ ಶ್ರೀ ರಾಮಕೃಷ್ಣ ಸೇವಾ ಸಮಾಜವು ಮಾ-ಶಾರದಾಮಣಿ ಅನಾಥಾಲಯ ಮತ್ತು ಮಂಜಕ್ಕೆ ಬಾಲಾಶ್ರಮ ಹಾಗೂ ನಿವೇದಿತಾ ಶಿಶುವಿಹಾರ ಮುಂತಾದ ಸಂಸ್ಥೆಗಳನ್ನು ಯಶಸ್ವಿಯಾಗಿ ನಮ್ಮ ಸಂಸ್ಥೆಯ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲೇ ಅವರ ಇಚ್ಛೆಯಂತೇ ನಡೆಸಿಕೊಂಡು ಬರುತ್ತಿದೆ.
ಈ ವರ್ಷ ನಮ್ಮ ಈ ಸೇವಾ ಸಂಸ್ಥೆಗಳಲ್ಲಿ 150ಕ್ಕೂ ಮಿಕ್ಕಿ ಅನಾಥ ಹಾಗೂ ನಿರ್ಗತಿಕ ಮಕ್ಕಳು ಆಶ್ರಯವನ್ನು ಪಡೆಯುತ್ತಿದ್ದಾರೆ. ಈ ಬಾಲಕ – ಬಾಲಕಿಯರ ಆಹಾರ, ವಸತಿ, ವಿದ್ಯಾಭ್ಯಾಸ ಇವುಗಳ ಹೊಣೆಯನ್ನು ಸಮಾಜವೇ ಸಂಪೂರ್ಣವಾಗಿ ನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಮಕ್ಕಳ ದೇಹ ಮನಸ್ಸುಗಳ ಸರ್ವಾಂಗೀಣ ಬೆಳವಣಿಗೆಯನ್ನು ಗಮನದಲ್ಲಿರಿಸಿ ನುರಿತ ಶಿಕ್ಷಕರಿಂದ ಯೋಗಾಭ್ಯಾಸ, ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಮುಂತಾದವುಗಳಲ್ಲಿ ತರಬೇತಿ ನೀಡುತ್ತಿದ್ದೇವೆ. ಸರಕಾರದಿಂದ ನಮಗೆ ಅನುದಾನ ಸಿಗುತ್ತದೆ. ಅಲ್ಲದೇ ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ, ಹಿತೈಷಿಗಳಿಂದ ಸಿಗುವ ಸಹಕಾರದಿಂದ ನಮ್ಮ ಎಲ್ಲಾ ಚಟುವಟಿಕೆಗಳು ನಡೆದು ಬರುತ್ತಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ.
ನಮ್ಮ ಸಂಸ್ಥೆಯ ಕೆಲವು ಕಟ್ಟಡಗಳು ಈಗ ಹಳೆಯದಾಗಿ ಇದರ ದುರಸ್ತಿ/ನವೀಕರಣ – ಹೊಸ ಶೌಚಾಲಯ ಹಾಗೂ ಸ್ನಾನಗೃಹದ ಅವಶ್ಯಕತೆ ಇದೆ. ಈ ಎಲ್ಲಾ ಕಾರ್ಯಗಳಿಗೆ ನಿಮ್ಮ ಸಹಾಯವನ್ನು ನಾವು ಯಾಚಿಸುತ್ತೇವೆ.
1. ಕಟ್ಟಡದ ರಚನೆಗೆ ದಾನವಾಗಿ ಹಣ ಕೊಡುವುದರ ಮೂಲಕ
2. ಸಮಾಜದ ಒಂದು ಅನಾಥ ಶಿಶುವನ್ನು ಗುರುತಿಸಿ ಈ ಮಗುವಿನ ಒಂದು ವರ್ಷದ ವೆಚ್ಚ ರೂ.8,000/-ವನ್ನು ತಾವು ದೇಣಿಗೆಯಾಗಿ ನೀಡುವ ಮೂಲಕ ಪೋಷಕರಾಗಿ.
3. ಸಮಾಜದ ಒಂದು ಅನಾಥ ಶಿಶುವನ್ನು ಗುರುತಿಸಿ ಈ ಮಗುವಿನ ಒಂದು ವರ್ಷದ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳ ವೆಚ್ಚ ರೂ.೧೫,೦೦೦ವನ್ನು ತಾವು ದೇಣಿಗೆಯಾಗಿ ನೀಡುವ ಮೂಲಕ ಪೋಷಕರಾಗಿ.
4. ಅ) ಎಲ್ಲಾ ಆಶ್ರಮವಾಸಿಗಳ ಒಂದು ದಿನದ ಊಟ ಉಪಾಹಾರದ ವೆಚ್ಚ ರೂ.10,000ವನ್ನು ತೆತ್ತು ಮಹಾದಾನಿಗಳಾಗುವ ಮೂಲಕ.
ಆ) ಆಶ್ರಮವಾಸಿಗಳ ಮಧ್ಯಾಹ್ನದ ಭೋಜನ ಅಥವಾ ರಾತ್ರಿ ಭೋಜನದ ವೆಚ್ಚಕ್ಕೆ ರೂ.4,000ನ್ನು ತೆತ್ತು ಮಹಾದಾನಿಗಳಾಗುವ ಮೂಲಕ.
ಇ) ಆಶ್ರಮವಾಸಿಗಳ ಬೆಳಗ್ಗಿನ/ಸಂಜೆಯ ಉಪಾಹಾರದ ವ್ಯವಸ್ಥೆ ಬಗ್ಗೆ ರೂ.3,000ವನ್ನು ನೀಡಿ ದಾನಿಗಳಾಗುವ ಮೂಲಕ.
5. ಟ್ರಸ್ಟ್ ಠೇವಣಿ ಇರಿಸಿ ಅದರ ಬಡ್ಡಿಯನ್ನು ತಾವು ಅಪೇಕ್ಷೆಪಟ್ಟ ಆಶ್ರಮದ ಕಾರ್ಯವ್ಯಾಪ್ತಿಯಲ್ಲಿರುವ ಕಾರ್ಯಚಟುವಟಿಕೆಗಳಿಗೆ ವಿನಿಯೋಗಿಸುವ ಮೂಲಕ.
6. ಪ್ರತೀ ತಿಂಗಳು ವಂತಿಗೆಯ ರೂಪದಲ್ಲಿ ಸಹಾಯ ನೀಡಬಹುದು. ಅಲ್ಲದೆ, ವಸ್ತುರೂಪದಲ್ಲಿಯೂ ಸಹಾಯವಿತ್ತು ಸಹಕರಿಸಬಹುದು.
7. ರೂ.30,000ವನ್ನು ಟ್ರಸ್ಟ್ ಠೇವಣಿ ಇರಿಸಿ ಅದರ ಬಡ್ಡಿಯನ್ನು ಮಧ್ಯಾಹ್ನ ಅಥವಾ ರಾತ್ರಿ ಭೋಜನದ ವ್ಯವಸ್ಥೆಗೆ ಶಾಶ್ವತವಾಗಿ ವಿನಿಯೋಗಿಸುವ ಮೂಲಕ.
8. ರೂ. 10,000ವನ್ನು ಟ್ರಸ್ಟ್ ಠೇವಣಿ ಇರಿಸಿ ಒಂದು ದಿನದ ಊಟ -ಉಪಾಹಾರದ ವ್ಯವಸ್ಥೆಗೆ ವಿನಿಯೋಗಿಸುವ ಮೂಲಕ.
ಈ ಮೇಲಿನ ಕೊಡುಗೆಗಳನ್ನು, ದೇಣಿಗೆಗಳನ್ನು ತಮ್ಮ ಅಥವಾ ತಾವು ಅಪೇಕ್ಷೆಪಟ್ಟವರ ಗೌರವಾರ್ಥ ಎಂದು ಪರಿಗಣಿಸಿ ಉಪಯೋಗಿಸಲು ಅವಕಾಶವಿದೆ.
ಮೇಲೆ ಹೇಳಿದ ಯೋಜನೆಗಳಲ್ಲಿ ಶಾಶ್ವತವಾಗಿ ನಡಕೊಂಡು ಬರುವರೇ ತಾವು ಅಪೇಕ್ಷೆಪಟ್ಟಲ್ಲಿ ಅಂತಹ ಯೋಜನೆಗಳಿಗೆ ಸಾಕಷ್ಟು ವಾರ್ಷಿಕ ಬಡ್ಡಿ ಬರುವ ರೀತಿಯ ಠೇವಣಿ ಇಟ್ಟಲ್ಲಿ ಈ ಬಡ್ಡಿಯನ್ನು ತಾವು ಸೂಚಿಸಿದಂತೆ ಆಯಾ ಯೋಜನೆಗಳಿಗೆ ಉಪಯೋಗಿಸಿಕೊಂಡು ಅವುಗಳನ್ನು ನಡೆಸಿಕೊಂಡು ಬರುವ ಶಾಶ್ವತ ವ್ಯವಸ್ಥೆಯನ್ನು ಮಾಡಲು ಅವಕಾಶವಿದೆ.
ತಾವು ಸಮಯಾವಕಾಶ ಮಾಡಿಕೊಂಡು ನಮ್ಮ ಆಶ್ರಮಕ್ಕೆ ಭೇಟಿಯಿತ್ತು ಮಕ್ಕಳಿಗೆ ಪ್ರೋತ್ಸಾಹವಿತ್ತು, ಈ ಸೇವಾಕಾರ್ಯಗಳಲ್ಲಿ ಭಾಗಿಗಳಾಗಬೇಕೆಂದು ಅಪೇಕ್ಷಿಸುತ್ತೇವೆ. ತಾವು ನೀಡುವ ಎಲ್ಲಾ ಸಹಾಯ ದೇಣಿಗೆಗಳಿಗೆ ಆದಾಯ ತೆರಿಗೆ 80ಜಿ ಪ್ರಕಾರದ ವಿನಾಯಿತಿ ಇರುತ್ತದೆ. ವಿದೇಶಿಯರ ದೇಣಿಗೆಯನ್ನು ಪಡಕೊಳ್ಳಲು ಸರಕಾರದಿಂದ ಅನುಮತಿ ಇದೆ.